'ಬಿಗ್ ಬಾಸ್' ಮುಗಿಸಿ ಬರುವ ಚಂದನ್ ಶೆಟ್ಟಿಗೆ ಅಮ್ಮನಿಂದ ಭರ್ಜರಿ ಗಿಫ್ಟ್ | Filmibeat Kannada

2018-01-28 2

'ಬಿಗ್ ಬಾಸ್ ಕನ್ನಡ-5' ಗ್ರ್ಯಾಂಡ್ ಫಿನಾಲೆ ಕೆಲವೇ ಗಂಟೆಗಳು ಮಾತ್ರ ಬಾಕಿಯಿದೆ. ಚಂದನ್ ಶೆಟ್ಟಿ, ಕಾರ್ತಿಕ್ ಜಯರಾಂ, ನಿವೇದಿತಾ ಗೌಡ, ಶ್ರುತಿ ಪ್ರಕಾಶ್ ಮತ್ತು ದಿವಾಕರ್ ಅವರಲ್ಲಿ ಯಾರು ಈ ಬಾರಿ ಗೆಲ್ಲಬಹುದು ಎಂಬ ಕುತೂಹಲ ಕಾಡುತ್ತಿದೆ.

ಇವರೆಲ್ಲ ಬಿಗ್ ಬಾಸ್ ನಿಂದ ಹೊರಬಂದ ಮೇಲೆ ಅವರವರದ್ದೇ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಬಹುಶಃ ಕೆಲವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಕೂಡ ಸಿಗಬಹುದು. ಇನ್ನು ಕೆಲವರಿಗೆ ಬೇರೆ ಅವಕಾಶಗಳು ಸಿಗಬಹುದು. ಚಂದನ್ ಶೆಟ್ಟಿಗೆ ಪೆಟ್ ಅನಿಮಲ್ಸ್ ಅಂದ್ರೆ ಮೊದಲಿನಿಂದಲೂ ಸಿಕ್ಕಾಪಟ್ಟೆ ಇಷ್ಟ.

ಆದ್ರೆ, ಚಂದನ್ ಶೆಟ್ಟಿ ಬಿಗ್ ಬಾಸ್ ಮುಗಿಸಿಕೊಂಡು ಮನೆಗೆ ಬಂದ ನಂತರ ಅಮ್ಮನಿಂದ ವಿಶೇಷವಾದ ಉಡುಗೊರೆಯೊಂದು ಕಾದಿದೆ. ಚಂದನ್ ಶೆಟ್ಟಿಗೆ ಅತ್ಯಂತ ಇಷ್ಟವಾದ ವಸ್ತುವೊಂದನ್ನ ಖರೀದಿಸಿ ಅವರ ತಾಯಿ ಇಟ್ಟುಕೊಂಡಿದ್ದಾರೆ. ಚಂದನ್ ಶೆಟ್ಟಿ ಮನೆಯಿಂದ ಹೊರಬಂದ ಕೂಡಲೇ ಅದನ್ನ ನೀಡಲಿದ್ದಾರೆ. ಅಷ್ಟಕ್ಕೂ, ಏನದು?
Chandan Shetty mother has decided to give surprise gift to his son, after he came out from Bigg boss Kannada 5.

Videos similaires